ಕ್ಲೀವೈಟ್-
ಯುರೇನಿಯಂ ಲೋಹದ ಒಂದು ಖನಿಜ. ನಿಸರ್ಗದಲ್ಲಿ ಯುರೇನಿಯಂ ಲೋಹದ ಪ್ರಮುಖ ಖನಿಜಗಳಲ್ಲೊಂದಾದ ಯುರೇನಿನೈಟ್ ಎಂಬುದು ರಾಸಾಯನಿಕವಾಗಿ ಯುರೇನಿಯಂ ಆಕ್ಸೈಡ್, ಪ್ರಥಮತಃ Uಔ2 ಆಗಿದ್ದು ಕ್ರಮೇಣ ಉತ್ಕರ್ಷಣ ಹೊಂದಿ Uಔ2.67 ಅಥವಾ U3ಔ8 ಆಗುವುದು. ಯುರೇನಿನೈಟ್ ವರ್ಗದ ಖನಿಜಗಳಲ್ಲಿ ಕ್ಲೀವೈಟ್ ಒಂದು. ಗಣನೀಯ ಮೊತ್ತದಲ್ಲಿ ಥೋರಿಯಂ ಮತ್ತು ಸೀರಿಯಂ ಶ್ರೇಣಿಯ ಲ್ಯಾಂಥನೈಡುಗಳು ಬೆರೆತಿರುವ ಯುರೇನಿನೈಟ್ ಖನಿಜವೇ ಕ್ಲೀವೈಟ್ ಎನಿಸಿಕೊಳ್ಳುತ್ತದೆ. ಯುರೇನಿಯಂ ಲೋಹದ ವಿಕಿರಣಪಟುತ್ವದಿಂದಾಗಿ ರೇಡಿಯಂ ಲೋಹ ಸದಾ ಉತ್ಪಾದಿತವಾಗುತ್ತಲಿದ್ದು ಕ್ಲೀವೈಟ್ ಖನಿಜದಲ್ಲಿ ರೇಡಿಯಂ ಕೂಡ ಒಂದು ವಿಶಿಷ್ಟಾಂಶವಾಗಿರುವುದು ಸಹಜ. ಕ್ಲೀವೈಟ್ ಖನಿಜವನ್ನು ಶೂನ್ಯ ವಾತಾವರಣದಲ್ಲಾಗಲಿ ಇಲ್ಲವೆ ಸಾರರಿಕ್ತ ಸಲ್‍ಫ್ಯೂರಿಕ್ ಆಮ್ಲದೊಡನೆಯಾಗಲಿ ಕಾಸಿದಾಗ ಸಾರಜನಕವನ್ನು ಹೋಲುವಂಥ ಮತ್ತು ರಾಸಾಯನಿಕವಾಗಿ ಜಡವಾದ ಒಂದು ಅನಿಲ ಹೊರ ಸೂಸುವುದಾಗಿ ಬಲು ಹಿಂದೆಯೇ ತಿಳಿದುಬಂದಿತ್ತು. 1894ರಲ್ಲಿ ಈ ಜಡ ಅನಿಲದ ಪುನಃಪರಿಶೀಲನೆಯಿಂದಾಗಿ ಅದರಲ್ಲಿ 20% ರಷ್ಟು ಮಾತ್ರ ಸಾರಜನಕವಿರುವುದಾಗಿಯೂ ಉಳಿದುದು ರಾಸಾಯನಿಕವಾಗಿ ಸಾರಜನಕಕ್ಕಿಂತ ಜಡವಾದ ಒಂದು ಅನಿಲವೆಂದೂ ತಿಳಿಯಬಂದಿತು. ಅಲ್ಲದೆ ಅದು ಆಗ ತಾನೆ ಇತರ ಮೂಲಗಳಿಂದ ಕಂಡು ಹಿಡಿಯಲ್ಪಟ್ಟಿದ್ದ ಹೀಲಿಯಂ ಧಾತುವೇ ಎಂಬುದೂ ನಿರ್ವಿವಾದವಾಗಿ ನಿರ್ಧರಿಸಲ್ಪಟ್ಟಿತು. ಕ್ಲೀವೈಟ್ ವಿಶೇಷವಾಗಿ ನಾರ್ವೆ ದೇಶದಲ್ಲಿ ದೊರೆಯುತ್ತದೆ. ಘನಸ್ಥಿತಿಯಲ್ಲಿ ಇದಕ್ಕೆ ಸ್ಫಟಿಕ ರಚನೆ ಉಂಟು. ಯುರೇನಿಯಮ್ಮಿನ ಪ್ರಮಾಣ 53.3%-66.4%, ಲ್ಯಾಂಥನೈಡುಗಳ ಪ್ರಮಾಣ 5.17% (ಇಟ್ರಿಯಂ, ಎರ್‍ಬಿಯಂ, ಸೀರಿಯಂ ಮತ್ತು ಲ್ಯಾಂಥನಂ, Uಔ2/Uಔ ಪ್ರಮಾಣ 0.5%-0.7% ವರೆಗಿರುತ್ತದೆ.
                                                            (ಎಚ್.ಎಸ್.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ